Sunday, February 3, 2019

Diabetes and complications of the sole

ಮಧುಮೇಹ(ಡಯಾಬಿಟಿಸ್)ಮತ್ತು ಪಾದದ ತೊಂದರೆಗಳು

ಮಧುಮೇಹ ಖಾಯಿಲೆ ಅಲ್ಲ,ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಕೆಲಸ ಮಾಡದೇ ಇರುವಾಗ, ಅಥವಾ ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾದರೂ ಸರಿಯಾಗಿ ಕೆಲಸ ಮಾಡದೇ ಇರುವಾಗ ನಾವು ಸೇವಿಸುವ ಆಹಾರವು ಸಕ್ಕರೆಯಾಗಿ ನೇರವಾಗಿ ರಕ್ತಕ್ಕೆ ಸೇರುವುದು.
ರಕ್ತದಲ್ಲಿ ಗ್ಲೂಕೋಸಿನ ಅಂಶ ಹೆಚ್ಚಾಗಿ ಮಧುಮೇಹ ಬರುವುದು. 

ಮಧುಮೇಹದಲ್ಲಿ ಎರಡು ವಿಧ:-
1) NIDDM - ನಾನ್ ಇನ್ ಸುಲಿನ್ ಡಿಪಂಡೆಂಟ್ ಡಯಾಬಿಟಿಸ್ ಮೆಲ್ಲಿಟಸ್.
ಇದು ಮಾತ್ರೆ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.
ಇದು 35 ವಯಸ್ಸಿನ ನಂತರ ಬರುವ ಡಯಾಬಿಟಿಸ್.

2) IDDM - ಇನ್ ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್ ಮೆಲ್ಲಿಟಸ್. ಇದು ಹುಟ್ಟಿದ ಮಗುವಿಗೂ ಬರಬಹುದು ,18 ವಯಸ್ಸಿನವರೆಗೂ ಬರಬಹುದು.ಇಂಜೆಕ್ಷನ್ ಇನ್ ಸುಲಿನ್ ಇರದೇ ಇವರು ಬದುಕಿರಲಾರರು.

ಡಯಾಬಿಟಿಸ್ ಒಂದು ಸಲ ಬಂದರೆ ಜೀವನ ಪರ್ಯಂತ ಇರುತ್ತದೆ ಆದ್ರೆ ನಿಯಂತ್ರಣದಲ್ಲಿಡಬಹುದು.ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ.

ಡಯಾಬಿಟಿಸ್ ಚಿಕಿತ್ಸೆಗೆ ಆರು ಮುಖ್ಯ ಅಂಶಗಳಿವೆ :-
1) ಆಹಾರ ಕ್ರಮದ ಅಳವಡಿಕೆ
2) ವ್ಯಾಯಾಮ ನಿಯಮಿತವಾಗಿ ಮಾಡುವುದು
3) ಔಷಧಿ ಸೇವನೆಯ ಸರಿಯಾದ ಸಮಯ
4) ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು 
5) ನಿರ್ಮಿತ ರಕ್ತ, ಮೂತ್ರ ಪರೀಕ್ಷೆ 
6) ಸಮತೋಲನದ ಜೀವನ ಕ್ರಮ.

ಡಯಾಬಿಟಿಸ್ ನಿಯಂತ್ರಣದಲ್ಲಿ ಇರದೇ ಇದ್ದರೆ ದೇಹದ ಪ್ರಮುಖ ಅಂಗಗಳಿಗೆ ತೊಂದರೆ ಆಗುವುದು.
ಕಿಡ್ನಿ, ಹೃದಯ,ಕಣ್ಣು,ಕಾಲಿನ ತೊಂದರೆ, ರಕ್ತನಾಳಗಳು,ಮೆದುಳಿನ ರಕ್ತ ಪರಿಚಲನೆಗೆ ತೊಂದರೆ ಯಾದಾಗ ಪಾರ್ಶುವಾಯು(ಲಕ್ವ) ಆಗುತ್ತದೆ.

ಡಯಾಬಿಟಿಸ್ ಪಾದದ ತೊಂದರೆಗಳು

ಡಯಾಬಿಟಿಸ್ ನರಗಳ ತೊಂದರೆಯು ಕೆಲವು ವರ್ಷಗಳ ನಂತರ ಬರಬಹುದು.
ಡಯಾಬಿಟಿಸ್ ನರಗಳ ತೊಂದರೆ ಉಂಟಾದಾಗ ಹೀಗಾಗಬಹುದು.
● ಕಾಲುಗಳಲ್ಲಿ ಸ್ಪರ್ಶಜ್ಯಾನ ಇಲ್ಲದಿರುವುದು
● ಪಾದಗಳಲ್ಲಿ ಜೋಮು ಉಂಟಾಗುವುದು 
● ಪಾದಗಳಲ್ಲಿ ಮತ್ತು ಕಾಲಿನ ಉರಿಯಾಗುವುದು
● ಪಾದ,ಕಾಲು ಮರಗಟ್ಟುವುದು
● ಗಂಟುಗಳಲ್ಲಿ  ನೋವು ಮತ್ತು ಉರಿ
● ಪಾದದ ಭಾರ ಊತ ಮತ್ತು ನಡೆಯಲು         ನಿಯಂತ್ರಣ ತಪ್ಪುವುದು. 

ಪಾದದ ನರಗಳಿಗೆ ತೊಂದರೆ ಆಗಿದೆಯೇ ತಿಳಿಯಲು ಈ ಎರಡು ಪರೀಕ್ಷೆ ಮಾಡಬಹುದು.
● ಸೆನ್ಸಿಟೋಮೀಟರ್ ನರದ ಪರೀಕ್ಷೆ 
● ಮೋನೋಫಿಲಮೆಂಟ್ ತೆಳುತಂತಿ ಪರೀಕ್ಷೆ .

ನ್ಯೂರೋಪತಿಯಿಂದ ಸ್ಪರ್ಶಜ್ಯಾನವಿಲ್ಲದೇ ಗಾಯವಾದರೆ ಅರಿವಾಗದಿರಬಹುದು.
ನ್ಯೂರೋಪತಿಯಿಂದ ಮುಟ್ಟಿದ್ದು ಗೊತ್ತಾಗದಿದ್ಧರೂ ನರಗಳು ಸಂವೇದನೆಯನ್ನು ಕಳಿಸುವ ಕೆಲಸ ಮಾಡುವುದರಿಂದ ಸೂಜಿಯಿಂದ ಚುಚ್ಚಿದ ಹಾಗಾಗಬಹುದು.ನೋವಾಗಬಹುದು.
ಬೆವರಿನ ಗ್ರಂಥಿಗಳು ಕೆಲಸ ಮಾಡದೇ ಪಾದದ ಕೆಳಗೆ ಒಣಪದರುಗಳಾಗಬಹುದು.ಪಾದದ ಹಿಮ್ಮಡಿ ಒಡೆಯಬಹುದು. 

ಡಯಾಬಿಟಿಸ್ ಪಾದದ ಸೋಂಕುಗಳು.

ಸೋಂಕಿನ ಅಪಾಯದ ಚಿನ್ಹೆಗಳಾವುದೆಂದರೆ ಚಿಕ್ಕಗಾಯದಿಂದ ಆರಂಭವಾಗಿ ಕೀವು,ಊತ,ಕೆಂಪಾಗುವುದು,ನೀರು ಬರುವುದು,ಬಣ್ಣ ಬದಲಾವಣೆ,ಕೆಂಪು,ಹಳದಿ,ನೀಲಿಗಟ್ಟುವಿಕೆ,.ಇದರೊಂದಿಗೆ ವಾಸನೆಯೂ ಬರುತ್ತದೆಮೂತ್ರದಲ್ಲಿನ ಮತ್ತು ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗುವುದು..
ಪಾದದಲ್ಲಿ ಸೋಂಕುಗಳು ವೇಗವಾಗಿ ಹಬ್ಬುತ್ತದೆ,ಸ್ವಲ್ಪ ಬಿಸಿ ತಗುಲಿದ ತಕ್ಕ ಚಿಕ್ಕ ಗಾಯಗಳು ದೊಡ್ಡ ಕುರುಗಳಾಗುತ್ತವೆ.ಸೋಂಕು ಆಳವಾಗಿ ಕೀವು ತುಂಬಲಿ ವೃಣಗಳಾಗುತ್ತವೆ.
ರಕ್ತ ಪರಿಚಲನೆಗೆ ರಕ್ತನಾಳದಲ್ಲಿ ಅಡ್ಡಿ ಉಂಟಾಗಿದ್ದರೆ ಪಾದ ಕಾಲು ಕಪ್ಪಾಗಿ ಗ್ಯಾಂಗ್ರೀನ್ ಆಗಿ ಕಾಲು ತೆಗೆಯುವ ಪರಿಸ್ಥಿತಿ ಬರಬಹುದು.
ರಕ್ತಪರಿಚಲನೆ ಕಾಲಿನಲ್ಲಿ ಚೆನ್ನಾಗಿದ್ದರೆ,ಚರ್ಮ ಮತ್ತು ಒಳ್ಳೆಯ ರಕ್ತ ಪರಿಚಲನೆಯು ಆರೋಗ್ಯವಾಗಿ ನಡೆಯುತ್ತದೆ.ಆಮ್ಲಜನಕ ಹಾಗೂ ಆಹಾರ ಎರಡೂ ರಕ್ತದ ಮೂಲಕ ಪ್ರವಹಿಸುವುದು.

ನಿಯಮಿತ ಪಾದದ ಆರೈಕೆ

ಪ್ರತೀ ದಿನ ನಿಮ್ಮ ಪಾದವನ್ನು ನೋಡಿ ಕೊಳ್ಳಿರಿ,ದಿನಕ್ಕೆರಡು ಬಾರಿ ನೀರು ಮತ್ತು  ಸಾಬೂನಿಂದ ತೊಳೆದು,ಒರೆಸಿ,ಕ್ರೀಂ ಹಚ್ಚಿರಿ.ದಿನವೂ ಒಗೆದ ಕಾಟನ್ ಸಾಕ್ಸ್  ಮತ್ತು ಡಯಾಬಿಟಿಸ್ ಪಾದರಕ್ಷೆಗಳನ್ನು ಬಳಸಿರಿ. ಪಾದದಲ್ಲಿ ಏನೇ ಪುಟ್ಟ ತೊಂದರೆ  ಬಂದರೂ ಪಾದದ ವೈದ್ಯರನ್ನು ಕಾಣಿರಿ.

ಪೋಡಿಯಾಟ್ರೀ ಎನ್ನುವುದು ಪಾದದ ಚಿಕಿತ್ಸೆ ಕೊಡುವ ವಿಶೇಷ ವಿಭಾಗ. 
ಪಾದದ ತೊಂದರೆಗಳಾದ ಒಣಚರ್ಮ,ವೃಣ, ಪಾದ ಒಡೆದ ಭಾಗಗಳು,ಕಾರ್ನ್ ಗಳು,ಒಣಪದರು,ಪಾದದ ಒತ್ತು ಪ್ರದೇಶದ ತೊಂದರೆಗಳಿಂದ ಗಾಯವಾಗಿರುವುದು,ಡಯಾಬಿಟಿಸ್ ನಿಂದ ಬಂದ ನರಗಳ ತೊಂದರೆ ಇದಕ್ಕೆಲ್ಲಾ ಚಿಕಿತ್ಸೆ ಕೊಡುವ ವಿಭಾಗ.

ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ದೇಶದ ಮೊದಲ ಪಾದ ಚಿಕಿತ್ಸಾ ವಿಭಾಗ ಹದಿನೆಂಟು ವರ್ಷಗಳ ಹಿಂದೆ ಶುರು ಮಾಡಲಾಯಿತು.ಇನ್ನೂ ದೇಶದ ಎಲ್ಲೆಡೆ ಈ ಸೌಲಭ್ಯ ಲಭ್ಯವಿಲ್ಲ. 
ಭಾರತದ ಸುಮಾರು 847 ಪಾದ ಚಿಕಿತ್ಸಕರಿಗೆ ಇಲ್ಲಿ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿಯೇ ತರಬೇತಿ ಕೊಡಲಾಗಿದೆ.
ಜಗತ್ತಿನ ವಿವಿಧ ಕಡೆಯಿಂದ ಬಂದು ಪಾದ ಚಿಕಿತ್ಸೆಯನ್ನು ಕಲಿತು ವೃತ್ತಿಭಾಂಧವರು ಅವರ ಆಸ್ಪತ್ರೆಯಲ್ಲಿ ಪೋಡಿಯಾಟ್ರಿ ವಿಭಾಗ ತೆರೆದಿದ್ದಾರೆ.

ಪೋಡಿಯಾಟ್ರಿ ವಿಭಾಗದಲ್ಲಿ..

ನರಗಳ ಪರೀಕ್ಷೆ ಮಾಡಲಾಗುವುದು,ರಕ್ತಪರಿಚಲನೆ ಪರೀಕ್ಷೆ ಮತ್ತು ಕಂಪ್ಯೂಟರ್ ಪುಟ್ ಸ್ಕ್ಯಾನ್ ಮೂಲಕ ಪಾದದಡಿಯ ಒತ್ತಡವನ್ನು ಪರೀಕ್ಷೆ ಮಾಡುತ್ತೇವೆ. 
ಪಾದದ ಮೇಲಿರುವ ಒತ್ತಡದ ಅಳತೆಯಂತೆ ಪಾದಕ್ಕೆ ವಿಶೇಷ ಪಾದರಕ್ಷೆಗಳನ್ನು ಕೊಡಲಾಗುವುದು.
ಪಾದದ ಜಲಚಿಕಿತ್ಸೆಯೂ ಇಲ್ಲಿ ಮಾಡುತ್ತೇವೆ. 
ಬೆರಳು ನಡುವೆಯಿರುವ ಫಂಗಲ್ ಇನ್ಫೆಕ್ಷನ್ ಗಳಿಗೆ ಪರಿಹಾರ ಹಾಗೂ ಚಿಕಿತ್ಸೆ ಮಾಡಲಾಗುವುದು.

ಪೋಡಿಯಾಟ್ರಿ ವಿಶೇಷ ವಿಭಾಗದ ಚಿಕಿತ್ಸೆಯು ಅತ್ಯಂತ  ಮುಖ್ಯವಾಗಿದ್ದು ಸಾಧ್ಯವಾದಷ್ಟು ಕಾಲುಗಳನ್ನು ಕಳೆದು ಕೊಳ್ಳದಂತೆ ಉಳಸುವುದೇ ಗುರಿಯಾಗಿದೆ

ನರಗಳ ಉರಿ ಉಪಶಮನಕ್ಕೆ ಅನೋಡೈನ್ ಥೆರಪಿ
(ಮೋನೋಕ್ರೊಮ್ಯಾಟಿಕ್ ಇನ್ ಫ್ರಾರೆಡ್ ಚಿಕಿತ್ಸೆ) 

ಈ ಚಿಕಿತ್ಸೆ ಯನ್ನು ಅಮೆರಿಕಾದಲ್ಲಿ ಕಂಡು ಹಿಡಿದರು ,ಜಗತ್ತಿನಾದ್ಯಂತ ನ್ಯೂರೋಪತಿ ನೋವುಗಳ ಶಮನಕ್ಕಾಗಿ ಉಪಯೋಗಿಸಲ್ಪಡುತ್ತಿದೆ.ನೋವುಮುಕ್ತರಾಗುವ ಜೊತೆಗೆ ಬೀಳುವುದು ಕಡಿಮೆಯಾಗುತ್ತದೆ.ನಡೆಯುವಾಗ ಆತ್ಮವಿಶ್ವಾಸ ಹೆಚ್ಚುತ್ತದೆ.90%ಅಷ್ಟು ಜನರಿಗೆ ಆರಾಮವಾಗಿದೆ.
ಇದು ಯಾವಾಗ ಅಗತ್ಯವಿರುತ್ತದೆಂದರೆ,
ಕಲ್ಲು ಒತ್ತಿದಂತಾದಾಗ,ಉರಿಯೂತ ಉಂಟಾದಾಗ,ನಡೆಯಲು ಎಡವಿದಂತಾಗ,ಜೋಮಿನಿಂದ ನರ ಮರಗಟ್ಟಿದಾಗ ಈ ಚಿಕಿತ್ಸೆಯನ್ನು 12 ದಿನಗಳ ಕಾಲ ನಲವತ್ತು ನಿಮಿಷಗಳು ಕೊಡಬಹುದು.ಇದು ಲಕ್ಷಾಂತರ ಜನರ ಪಾದದ ಉರಿ  ಕಡಿಮೆ ಮಾಡುವುದರಲ್ಲಿ ಸಹಾಯ ಮಾಡಿದೆ.ಅನೋಡೈನ್ ಥೆರಪಿಯು ವೈದ್ಯ ಲೋಕಕ್ಕೂ ಒಂದು ವರವೇ  ಮಾತ್ರೆ ಇಂಜೆಕ್ಷನ್ ಕೊಡಲಾಗದೇ ಇರುವ ಸಂಧರ್ಭದಲ್ಲಿ  ಈ ಆನೊಡೈನ್ ಚಿಕಿತ್ಸೆ  ಕೊಡಬಹುದು .
ಇದು ಸುಲಭವಾದ ನೋವಿರದ ಚಿಕಿತ್ಸೆ ,ಎರಡೂ ಕಾಲಿಗೆ ನಾಲ್ಕು ನಾಲ್ಕು ಬೆಳಕು ಸೂಸುವ ಪಟ್ಟಿಗಳನ್ನು ಕಟ್ಟಿ ಇನ್ ಫ್ರಾರೆಡ್ ಕಿರಣಗಳನ್ನು ಹಾಯಿಸಿ ಶಕ್ತಿಯುತವಾಗಿಯೂ,ರಕ್ತಪರಿಚಲನೆ ಚೆನ್ನಾಗಿ ಆಗುವಂತೆಯೂ, ನೋವು ಉರಿ ಕಡಿಮೆಯಾಗುವಂತೆಯೂ ಮಾಡಬಹುದು.

ಡಾ.ವಿನಯ.ಎ.ಎಸ್.
ಡಯಾಬಿಟಿಸ್ ಪಾದತಜ್ನ್ಯರು

No comments:

Diabetes and complications of the sole

ಮಧುಮೇಹ(ಡಯಾಬಿಟಿಸ್)ಮತ್ತು ಪಾದದ ತೊಂದರೆಗಳು ಮಧುಮೇಹ ಖಾಯಿಲೆ ಅಲ್ಲ,ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಕೆಲಸ ಮಾಡದೇ ಇರುವಾಗ, ಅಥವಾ ಮೇದೋಜೀರಕ ಗ್ರಂಥಿಯಲ್ಲಿ ...